'ಗಂಡ ಹೆಂಡತಿ' ಖ್ಯಾತಿಯ ಸಂಜನಾ ತೆಲುಗಿನಲ್ಲಿ ಬ್ಯುಸಿಯಾಗಿರುವುದು ಗೊತ್ತೆ ಇದೆಯಲ್ಲಾ. ಈಗವರು 'ದುಶ್ಯಾಸನ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಂಜನಾ ಟಾಪ್ ಲೆಸ್‌ನಲ್ಲಿ ಕಾಣಿಸಲಿದ್ದಾರೆ ಎಂಬ ಸುದ್ದಿ ಪಡ್ಡೆಗಳ ಪಾಲಿಗೆ ಪುಳಕ ನೀಡಿತ್ತು. ಆದರೆ ಈ ಸುದ್ದಿಯನ್ನು ಸಂಜನಾ ಅಲ್ಲಗಳೆಯುವ ಮೂಲಕ ತಣ್ಣೀರೆರಚಿದ್ದಾರೆ.
ಎಷ್ಟೇ ದೊಡ್ಡ ನಟನಾಗಿರಲಿ ನಾನು ಈ ರೀತಿಯ ಅಸಭ್ಯ ದೃಶ್ಯಗಳಲ್ಲಿ ನಟಿಸುವುದಿಲ್ಲ" ಎಂದು ಸಂಜನಾ ಸ್ಪಷ್ಟಪಡಿಸಿದ್ದಾರೆ. ಚಿತ್ರದಲ್ಲಿ ಸನ್ನಿವೇಶವೊಂದಕ್ಕೆ ಚರ್ಮದ ಬಣ್ಣದ ಬಟ್ಟೆಯನ್ನು ಬಳಲಾಗಿದೆ. ಖಳನಟ ಮತ್ತು ಈಕೆಯ ನಡುವಿನ ಸನ್ನಿವೇಶವೊಂದರಲ್ಲಿ ಬಟ್ಟೆ ಹರಿದುಹೋಗುತ್ತದಂತೆ. ಅದನ್ನು ಕೊಂಚ ಮಸುಕು ಮಾಡಿ ತೋರಿಸಲಾಗಿದೆ. ಅದನ್ನೇ ಟಾಪ್ ಲೆಸ್ ದೃಶ್ಯ ಎಂದು ಬಿಂಬಿಸಲಾಗಿದೆ ಎಂದು ಸಂಜನಾ ಹೇಳಿದ್ದಾರೆ.